ಸೋಮವಾರ, ಜೂನ್ 29, 2015

ಪ್ರವಾಸ - ೩

ಇಲ್ಲಿಂದ ಅವನಿಅತ್ತುರ್ ಹಾಗು ಅರಪೊತ್ತುರ್ ರಿಂಗ್ ರಸ್ತೆಯ ಮೂಲಕ ರಾಮೇಶ್ವರ ತಲುಪಬಹುದು. ಸುಮಾರು ೧೬೦ ಕಿ.ಮಿ ಸೊಗಸಾದ ರಸ್ತೆ, ಸುಂದರ ಪರಿಸರದ ನಡುವೆ ಪ್ರಾಯಾಣಿಸುವ ಖುಷಿಯೇ ಬೇರೆ. ರಸ್ತೆ ಬದಿಯಲ್ಲಿ ಹಲವು ಕಡೆ ತಾಟಿನಿಂಗುಗಳನ್ನು ಮಾರುತಿರುತ್ತಾರೆ. ಆಗಿನ್ನು ಗಿಡದಿಂದ ಕಿತ್ತು ಕಣ್ಣಮುಂದೆ ಹಚ್ಚಿಕೊಟ್ಟ ಹಣ್ಣುಗಳನ್ನು ತಪ್ಪದೆ ತಿನ್ನಬೇಕು. ರಾಮೇಶ್ವರ ಬಹುಪಾಲು ದ್ವೀಪದಹಾಗಿರುವುದರಿಂದ ಮಧ್ಯಾ ಒಂದು ಸೇತುವೆ ಇದೆ. ಇದು ಮಂಡಪಂ ಹಾಗು ರಾಮೇಶ್ವರವನ್ನ ಸೇರಿಸುತ್ತದೆ. ಮೊದಲಿಗೆ ಮಂಡಪಂ‍ನಿಂದ ರಾಮೇಶ್ವರಕ್ಕೆ ರಸ್ತೆ ಇರಲಿಲ್ಲ. ಯಾತ್ರಿಗಳು ಮಂಡಪಂಗೆ ಬಂದು ಅಲ್ಲಿಂದ ರೈಲಿನ ಮೂಲಕ ರಾಮೇಶ್ವರ ತಲುಪಬೇಕಿತ್ತು. ಇಲ್ಲಿನ ರೈಲ್ ಸೇತುವೆಯನ್ನ ಪಂಬನ್ ಬ್ರಿಡ್ಜ್‍ಯೆಂದು ಕರೆಯುತ್ತಾರೆ. ಇದು ಬ್ರಿಟಿಷರ ಕಾಲದ್ದು. ಈ ಸೇತುವೆಯಬಗ್ಗೆ ಒಂದು ಪ್ರಸಿದ್ಧ ಹಾಗು ವಿಶಾದನೀಯ ಕಥೆ ಉಂಟು, ಅದರ ಚರ್ಚೆ ಸಧ್ಯಕ್ಕೆ ಬೇಡ. ರಸ್ತೆ ಸೇತುವೆಯಿಂದ ಈ ರೈಲ್ ಸೇತುವೆ ಕಾಣಿಸುತ್ತದೆ. ತಪ್ಪದೆ ನೋಡಿ ಖುಷಿಪಡಬೇಕು.

ರಾಮೇಶ್ವರ ತಲುಪಿದ ನಂತರ ಅಲ್ಲಿಯವರೆ ಆದ ರಾಮು ಎಂಬ ಗೈಡ್‍ನ ಪರಿಚಯವಾಯ್ತು ಅವರು ಅಲ್ಲಿ ಹೋಟೆಲ್ ಸೆಂತಿಲ್ ಆನ್ಡಾವರ‍್ ನಲ್ಲಿ ನಮಗೆ ಉಲ್ಕೊಳೋ ವ್ಯವಸ್ತೆ ಮಾಡಿದ್ದರು. ರಾಮನಥ ದೇವಸ್ಥಾನದಿಂದ ಎರಡು ನಿಮಿಷಗಳ ಕಾಲ್ನಡಿಗೆಯ ದೂರವಷ್ಟೆ. ಹೋಟೆಲ್ಲು ಚನ್ನಾಗಿದೆ, ಅಲ್ಲಿನ ವ್ಯವಸ್ಥೆಗಳು ಚನ್ನಾಗಿವೆ ಆದರೆ ಖಾನಾವಲಿ ದೊರಕುವುದಿಲ್ಲ. ಸುತ್ತಾಮುತ್ತಾ ಒಳ್ಳೆಯ ಹೋಟೆಲ್‍ಗಳೂ ಇಲ್ಲ ಇರೋ ಹೋಟೆಲ್‍ಗಳು ಅಷಟಕಷ್ಟೆ. ರೂಮಿಗೆ ಹೋಗಿ ಸುಧಾರಿಸಿಕೊಂಡು ಸಾಯಂಕಾಲದ ಹೊತ್ತಿಗೆ ನಾವು ಸಮುದ್ರದತ್ತ ಪ್ರಯಾಣ ಬೆಳೆಸಿದೆವು. ಸಮುದ್ರದಡ ಅಷ್ತೇನು ಚನ್ನಾಗಿ ವ್ಯವಸ್ಥಿತವಾಗಿಲ್ಲ. ಸ್ನಾನ ಇತ್ಯಾದಿ ಪೂಜ ಕಾರ್ಯಕ್ರಮಗಳಿಗೆ ಮೆಟ್ಟಿಲು ಹಾಗು ಕಟ್ಟೇಗಳನ್ನು ಕಟ್ಟಿದ್ದಾರೆ ಹಾಗೆ ಸ್ವಚ್ಛವಾಗಿವೆ ಕೂಡ.ಬೀದಿಗಳು ಅಂಗಡಿಗಳಿಂದ ತುಂಬಿಹೋಗಿದೆ ಎಲ್ಲಾ ರೀತಿಯ ಎಲ್ಲಾ ಆಕಾರದ ಶಂಖಗಳು, ಕಪ್ಪೆ-ಚಿಪ್ಪುಗಳು ದೊರಕುತ್ತವೆ.

ರಾಮೇಶ್ವರದ ವೈಶಿಷ್ಟ್ಯಗಳು ಹಲವಿವೆ. ಅಲ್ಲಿನ ರಾಮನಥಸ್ವಾಮಿ / ರಾಮೇಶ್ವರ ದೇವಸ್ಥನದಲ್ಲಿ ಪುರಾತನವಾದ ಸ್ಫಟಿಕ ಲಿಂಗವಿದೆ. ಬೆಳಗಿನಜಾವ  ೪:೩೦ ರಿಂದ ೫:೪೫ ರವರೆಗೆ ಆ ಸ್ಫಟಿಕ ಲಿಂಗವನ್ನು ಯಾವುದೇ ಅಲಂಕಾರ, ಕವಚ ಇತ್ಯಾದಿ ಇಲ್ಲದೆ ಬೆಳಗಿನ ಪೂಜೆ ಮಾಡಿ ದರ್ಶನಕ್ಕೆ ಇಡಲಾಗುತ್ತದೆ. ಆ ಸೌಂದರ್ಯ, ’ಸ್ಫಟಿಕ ಸ್ಪಷ್ಟತೆ’ ಅಹಾ! ವರ್ಣನಾತೀತವಾದದ್ದು. 

ರಾಮೇಶ್ವರಕ್ಕೆ ಹೋಗುವ ಮತ್ತೊಂದು ಉದ್ದೇಶ್ಯ ಕಾಶಿ-ಯಾತ್ರೆಯನ್ನು ಪ್ರಾರಂಭಿಸುವುದು. ಶಾಸ್ತ್ರೋಕ್ತವಾಗಿ ಕೆಲವು ಕೈಂಕರ್ಯಗಳಿವೆ. ಬೆಳ್ಳಂಬೆಳಗ್ಗೆ ಸೂರ್ಯೋದಯದ ಮುನ್ನ ಕಷ್ಟಾಪಟ್ಟು ಹಾಸಿಗೆ ಬಿಟ್ಟು ಎದ್ದು ಸಮುದ್ರತೀರವನ್ನು ಸೇರಿ, ಸ್ನಾನ ಮಾಡಬೇಕು. ತದನಂತರ ಅಲ್ಲಿರುವ ಪುರೋಹಿತರಿಂದ ಒಂದಿಷ್ಟು ಪೂಜಾ ಕೈಂಕರ್ಯಗಳನ್ನು ಮುಗಿಸಿದ್ವಿ.

ರಾಮೇಶ್ವರದ ಮತ್ತೊಂದು ವೈಶಿಷ್ಟ್ಯತೆ ದೇವಸ್ಥಾನದ ಪ್ರಾಂಗಣದಲ್ಲಿರುವ ೨೨ ಭಾವಿಗಳು. ಸಮುದ್ರ ಪಕ್ಕದಲ್ಲೇ ಇರುವ ದೇವಸ್ಥಾನದಲ್ಲಿ ಇರೋ ಈ ಭಾವಿಗಳಲ್ಲಿ ಸಿಹಿ ನೀರು ಸಿಗುತ್ತದೆ. ಈ ೨೨ ಭಾವಿ ನೀರಿನಲ್ಲಿ ಸ್ನಾನಮಾಡುವುದು ಶ್ರೇಷ್ಠ ಎಂಬುದು ಒಂದು ನಂಬಿಕೆ. ರೋಮ್‍ನಲ್ಲಿರುವಾಗ ರೋಮನ್ನರಾಗಿಯೇ ಇರಬೇಕು ಎಂಬುದು ಆಂಗ್ಲಾದಲ್ಲಿನ ಒಂದು ನುಡಿ. ಹಾಗೆ ನಾವುನು ಭಾವಿ ಸ್ನಾನಕ್ಕೆ ಟಿಕೆಟ್ಟು ಕೊಂಡು, ೨೨ ಭಾವಿ ನೀರಿನ ಸ್ನಾನ ಮುಗಿಸಿದ್ವಿ. ಅಲ್ಲಿನ ದೇವಸ್ಥಾನದ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ಮರಿಯದೇ ಗಮನಿಸಬೇಕು. ದೇವಸ್ಥಾನದ ಗೋಡೆಗಳ ಮೇಲೆ,  ಕಂಬಗಳ ಮೇಲೆ ತಮಿಳು, ತೆಲುಗು, ಪ್ರಾಕೃತ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶಾಸನಗಳನ್ನು ಕಾಣಬಹುದು. ದೇವಸ್ಥಾನದ ಪ್ರಾಂಗಣ ಅತಿ ವಿಶಾಲವಗಿದೆ ನಡೆಯುವುದಕ್ಕೆ ಶಕ್ತಿ, ಸಹನೆ ಎರಡೂ ಬೇಕು. 

ಮುಂದಿನ ಪಯಣವನ್ನು ಮುಂದಿನ ಅಂಕಣದಲ್ಲಿ ಮುಂದುವರಿಸುತ್ತೇನೆ... 
.